ಅಭಿಪ್ರಾಯ / ಸಲಹೆಗಳು

ಪರಿಚಯ ಮತ್ತು ನಡೆದು ಬಂದ ದಾರಿ

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು, ರಾಜ್ಯಗಳ ಪುನರ್ವಿಂಗಡಣೆಯ ಸಮಯದಲ್ಲಿ ಸ್ಥಾಪಿತವಾಗಿದ್ದು, ಆಗ ಅದರ ನಾಮಧೇಯ ಮೈಸೂರು ಸಂಗೀತ ನಾಟಕ ಅಕಾಡೆಮಿ ಎಂದಾಗಿತ್ತು. ಅಕಾಡೆಮಿಯ ಈ ಗುರುತರ ಜವಾಬ್ದಾರಿಯನ್ನು ನಿರ್ವಹಿಸಲು ಮೂರು ವರ್ಷಗಳ ಅವಧಿಗೆ ಅರ್ಹ ವ್ಯಕ್ತಿಗಳನ್ನು ಅಧ್ಯಕ್ಷರು ಹಾಗೂ ಸದಸ್ಯರುಗಳನ್ನಾಗಿ ನೇಮಕ ಮಾಡಲಾಗುತ್ತದೆ. ಅಕಾಡೆಮಿಯ ಮೊದಲ ಅಧ್ಯಕ್ಷರಾಗಿದ್ದವರು ರಾಜ್ಯದ ಘನತೆವೆತ್ತ ರಾಜಪ್ರಮುಖರಾಗಿದ್ದ ಶ್ರೀ ಜಯಚಾಮರಾಜ ಒಡೆಯರ್, ನಾಡಿನ ಶ್ರೇಷ್ಠ ಕಲಾವಿದರಾಗಿದ್ದ ಗುಬ್ಬಿ ವೀರಣ್ಣ, ಟಿ.ಚೌಡಯ್ಯ, ಅ.ನ.ಕೃಷ್ಣರಾವ್, ಬಿ.ಶಿವಮೂರ್ತಿ ಶಾಸ್ತ್ರಿ ಮುಂತಾದವರೆಲ್ಲಾ ಸದಸ್ಯರಾಗಿದ್ದರು.

ಆಳವಾದ ಸಾಂಸ್ಕೃತಿಕ ಬೇರುಗಳನ್ನು ಹೊಂದಿರುವ ನಾಡಿನ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಇನ್ನಷ್ಟು ಗಟ್ಟಿಗೊಳಿಸುವ, ಜನಸಮುದಾಯಕ್ಕೆ ತಲುಪಿಸುವ ಕೆಲಸವನ್ನು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ನಡೆಸಿಕೊಂಡು ಬರುತ್ತಿದೆ. 1978 ರಲ್ಲಿ ಸ್ವಾಯತ್ತತೆ ಪಡೆದ ನಂತರ, ಅಕಾಡೆಮಿಯು ಸಾಂಸ್ಕೃತಿಕ ಪರಿಪೂರ್ಣತೆಯನ್ನು ಸಾಧಿಸುವ ನಿಟ್ಟಿನಲ್ಲಿ ಹಲವಾರು ಮಹತ್ತರವಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮರ್ಪಕವಾಗಿ ನಡೆಸುತ್ತಾ ಬಂದಿದೆ.ವಿವಿಧ ಸಂಗೀತ ನೃತ್ಯ ಕಲಾ ಪ್ರಕಾರಗಳನ್ನು ಪೋಷಿಸಿ, ಬೆಳೆಸಿ ನಾಡಿನ ನೆಲದಲ್ಲಿ ಕಂಪು ಸೂಸು ಶ್ಲಾಘನೀಯ ಕೆಲಸವನ್ನು ಅಕಾಡೆಮಿ ಮಾಡುತ್ತಿದೆ.

ಅಕಾಡೆಮಿ ಕಾರ್ಯಚಟುವಟಿಕೆಗಳಲ್ಲಿ ಅಂತರರಾಜ್ಯ, ಸಂಗೀತ ನೃತ್ಯ ಕಾರ್ಯಕ್ರಮಗಳ ವಿನಿಮಯ, ಸ್ಥಳೀಯ ಕಲಾ ತಂಡಗಳ ಪ್ರದರ್ಶನ ಮುಖ್ಯವಾದವುಗಳಾಗಿದ್ದವು.

ನಂತರದ ದಿನಗಳಲ್ಲಿ ಈ ಅಕಾಡೆಮಿಯನ್ನು ವಿದ್ಯಾ ಇಲಾಖೆಯ ಆಡಳಿತಕ್ಕೆ ಒಳಪಡಿಸಲಾಯಿತು. ಆಯಾ ಸಮಯದ ವಿದ್ಯಾ ಮಂತ್ರಿಗಳು ಅಕಾಡೆಮಿಯ ಅಧ್ಯಕ್ಷ ಪದವಿಯನ್ನು ಅಲಂಕರಿಸುತ್ತಾ ಬಂದರು. ಶ್ರೀಯುತರಾದ ಕೆ.ವಿ.ಶಂಕರಗೌಡ, ಎಸ್.ಆರ್.ಕಂಠಿ, ಎ.ಆರ್.ಬದರಿನಾರಾಯಣ್, ಅಣ್ಣಾರಾವ್ ಗಣಮುಖಿಯವರನ್ನು ಇಲ್ಲಿ ಹೆಸರಿಸಬಹುದು..

1978ರಲ್ಲಿ ಸ್ವಾಯತ್ತತೆ ಪಡೆದ ಅಕಾಡೆಮಿಯ ಮೊದಲ ಅಧ್ಯಕ್ಷರಾಗಿ ಖ್ಯಾತ ನೃತ್ಯ ಕಲಾವಿದೆಯಾದ ಶ್ರೀಮತಿ ಕೋಮಲ ವರದನ್ ಅವರನ್ನು ನೇಮಕ ಮಾಡಲಾಯಿತು. ನಂತರ ಕ್ರಮವಾಗಿ, ಸಂಗೀತ ನೃತ್ಯ ಕ್ಷೇತ್ರದಲ್ಲಿ ದಿಗ್ಗಜರಾದ ಡಾ.ಗಂಗೂಬಾಯಿ ಹಾನಗಲ್, ಡಾ.ವಿ.ದೊರೆಸ್ವಾಮಿ ಅಯ್ಯಂಗಾರ್,ಡಾ.ಮಾಯಾರಾವ್, ಪಂ.ಆರ್.ವಿ.ಶೇಷಾದ್ರಿಗವಾಯಿ, ಶ್ರೀಮತಿ ಚಂದ್ರಭಾಗಾದೇವಿ, ಡಾ.ಶ್ಯಾಮಲಾ ಜಿ ಭಾವೆ, ಶ್ರೀಮತಿ ಎಚ್.ಆರ್.ಲೀಲಾವತಿ, ಪಂ.ರಾಜಶೇಖರ ಮನ್ಸೂರ್, ಪಂ.ನರಸಿಂಹಲು ವಡವಾಟಿ, ಶ್ರೀಮತಿ ವೈಜಯಂತಿ ಕಾಶಿ, ಶ್ರೀಮತಿ ಗಂಗಮ್ಮ ಕೇಶವಮೂರ್ತಿ, ಉಸ್ತಾದ್ ಫಯಾಜ್ ಖಾನ್ ಹಾಗೂ ಪ್ರಸಕ್ತ ಸಾಲಿನಲ್ಲಿ ಶ್ರೀ ಆನೂರು ಅನಂತಕೃಷ್ಣಶರ್ಮ ಅವರು ಅಧ್ಯಕ್ಷ ಪದವಿಯನ್ನು ಅಲಂಕರಿಸಿದ್ದಾರೆ..

ಅಕಾಡೆಮಿಯ ಮೂರು ವರ್ಷ ಅವಧಿಯ ಈ ಗುರುತರ ಜವಾಬ್ದಾರಿಯನ್ನು ನಿರ್ವಹಿಸಲು ಮಾನ್ಯ ಅಧ್ಯಕ್ಷರೊಂದಿಗೆ ಸದಸ್ಯರುಗಳನ್ನು ಸರ್ಕಾರ ನೇಮಕ ಮಾಡಲಾಗುತ್ತದೆ. .

ಆಳವಾದ ಸಾಂಸ್ಕೃತಿಕ ಬೇರುಗಳನ್ನು ಹೊಂದಿರುವ ನಾಡಿನ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಇನ್ನಷ್ಟು ಗಟ್ಟಿಗೊಳಿಸುವ, ಜನಸಮುದಾಯಕ್ಕೆ ತಲುಪಿಸುವ ನಿಟ್ಟಿನಲ್ಲಿ ಹಾಗೂ ಸಾಂಸ್ಕೃತಿಕ ಪರಿಪೂರ್ಣತೆಯನ್ನು ಸಾಧಿಸುವ ನಿಟ್ಟಿನಲ್ಲಿ ಹಲವಾರು ಮಹತ್ತರವಾದ ಕಾರ್ಯಕ್ರಮಗಳನ್ನು ಅಕಾಡೆಮಿ ಹಮ್ಮಿಕೊಂಡು ಸಮರ್ಪಕವಾಗಿ ನಡೆಸುತ್ತಾ ಬಂದಿದೆ. ಸಂಗೀತ ನೃತ್ಯ ಕಲಾ ಪ್ರಕಾರಗಳನ್ನು ಪ್ರೋತ್ಸಾಹಿಸುವ ಹಾಗೂ ಅವುಗಳ ಸರ್ವಾಂಗೀಣ ಅಭಿವೃದ್ದಿಗೆ ಕೆಳಕಂಡ ಕಾರ್ಯಕ್ರಮಗಳನ್ನು ಅಕಾಡೆಮಿ ಹಮ್ಮಿಕೊಂಡು ಕಾರ್ಯಗತಗೊಳಿಸಿದೆ. .

•ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಶಿಷ್ಯವೇತನ ನೀಡಲಾಗುವುದು.• ಸಂಗೀತ ನೃತ್ಯಕ್ಕೆ ಸಂಬಂಧಪಟ್ಟ ಪ್ರಯೋಜನಕಾರಿ ಲೇಖನ ಹಾಗೂ ಪುಸ್ತಕಗಳನ್ನು ಪ್ರಕಟಿಸುವುದು.•ಸಂಗೀತ ನೃತ್ಯ ಹಿರಿಯ ಹಾಗೂ ಯುವ ಕಲಾವಿದರಿಗೆ ವೇದಿಕೆ ಕಲ್ಪಿಸಿಕೊಡುವ ನಿಟ್ಟಿನಲ್ಲಿ ರಾಜ್ಯಾದಾದ್ಯಂತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.. .

•ಗಡಿನಾಡು, ಹೊರನಾಡು ಸಂಗೀತ ನೃತ್ಯೋತ್ಸವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗವುದು.
•ಸಂಗೀತ ನೃತ್ಯಕ್ಕೆ ಸಂಬಂಧಪಟ್ಟಂತೆ ರಸಗ್ರಹಣ ಶಿಬಿರ, ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗುವುದು.
•ಸಂಗೀತ ನೃತ್ಯ ಕ್ಷೇತ್ರದ ದಿಗ್ಗಜರ ಸಾಧನೆ ಕುರಿತಂತೆ, ಸಾಕ್ಷ್ಯಚಿತ್ರ ನಿರ್ಮಾಣ, ಶತಮಾನೋತ್ಸವ ಸಮಾರಂಭಗಳನ್ನು ಹಮ್ಮಿಕೊಳ್ಳಲಾಗುವುದು.
•ಸಂಗೀತ ನೃತ್ಯ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದ ಇಬ್ಬರಿಗೆ ಗೌರವ ಪ್ರಶಸ್ತಿ ಹಾಗೂ 16 ಮಂದಿಗೆ ವಾರ್ಷಿಕ “ಕರ್ನಾಟಕ ಕಲಾಶ್ರೀ” ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು. .

ಇತ್ತೀಚಿನ ನವೀಕರಣ​ : 13-11-2020 11:17 AM ಅನುಮೋದಕರು: Approver karnatakasangeetanrityaacademy


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080